ಮಹಾ ಚೋಳ ದೇವಾಲಯಗಳು ಭಾರತದ ತಮಿಳು ನಾಡು ರಾಜ್ಯದಲ್ಲಿವೆ. ಚೋಳ ಅರಸರ ಕಾಲದಲ್ಲಿ ನಿರ್ಮಾಣಗೊಂಡ ತಂಜಾವೂರಿನ ಬೃಹದೀಶ್ವರ ದೇವಾಲಯ, ಗಂಗೈಕೊಂಡ ಚೋಳಪುರಮ್‍‍ನ ಗಂಗೈಕೊಂಡ ಚೋಳೀಶ್ವರ ದೇವಾಲಯ ಮತ್ತು ದಾರಾಸುರಂನ ಐರಾವತೇಶ್ವರ ದೇವಾಲಯಗಳು ಒಟ್ಟಾಗಿ ಮಹಾ ಚೋಳ ದೇವಾಲಯಗಳೆನಿಸಿವೆ. ೧೯೮೭ರಲ್ಲಿ ಬೃಹದೀಶ್ವರ ದೇವಾಲಯವನ್ನು ವಿಶ್ವ ಪರಂಪರೆಯ ತಾಣವನ್ನಾಗಿ ಘೋಷಿದ ಯುನೆಸ್ಕೋ ಮುಂದೆ ೨೦೦೪ರಲ್ಲಿ ಉಳಿದೆರಡನ್ನು ಇದರೊಂದಿಗೆ ಸೇರಿಸಿದೆ. == ಇವನ್ನೂ ನೋಡಿ == ವಿಶ್ವ ಪರಂಪರೆಯ ತಾಣ == ಬಾಹ್ಯ ಸಂಪರ್ಕಗಳು == ಯುನೆಸ್ಕೋದ ಅಧಿಕೃತ ಅಂತರ್ಜಾಲತಾಣದಲ್ಲಿ ಮಹಾ ಚೋಳ ದೇವಾಲಯಗಳ ಬಗ್ಗೆ ಮಾಹಿತಿ